ಬೆನ್ನು ನೋವಿನಿಂದ ಮುಕ್ತಿ ಪಡೆಯಲು ಮನೆಮದ್ದೇನು ಗೊತ್ತೇ?
ಬೆನ್ನು ನೋವು ಯುವಕ/ಯುವತಿಯರನ್ನು ಪೀಡಿಸುತ್ತಿರುವ ಸಮಾನ್ಯ ಕಾಯಿಲೆಯಾಗಿದೆ. ಆಹಾರ ಪದ್ದತಿ, ಬದಲಾದ ಕೆಲಸದ ಮಾದರಿ, ಜೀವನ ಪದ್ದತಿಗಳಿಂದ ಬೆನ್ನು ನೋವು ಸಾಮಾನ್ಯವಾಗಿಬಿಟ್ಟಿದೆ. 30-40ರ ಹರೆಯದಲ್ಲೇ ಬೆನ್ನು ನೋವಿನಿಂದ ವಿವಿಧ ಬಗೆಯ ಚಿಕಿತ್ಸೆಗಾಗಿ ಸರ್ಕಸ್ ಮಾಡುವವರ ಸಂಖ್ಯೆಯೇ ಈಗ ಹೆಚ್ಚಾಗಿದೆ. ಇದನ್ನು ಲೋವರ್ ಬ್ಯಾಕ್ ಪೇನ್ ಎಂದೂ ಕರೆಯಲಾಗುತ್ತದೆ. ಬೆನ್ನು ನೋವಿಗೆ ಚಿಕಿತ್ಸೆ ನೀಡದೆ ಬಿಡುವಂತಿಲ್ಲ. ಹಾಗೆ ಮಾಡಿದ್ದೇ ಆದಲ್ಲಿ, ಪರಿಣಾಮ ಮತ್ತಷ್ಟು ಗಂಭೀರವಾಗಿಯೇ ಬಿಡುತ್ತದೆ. ಆರಂಭಿಕ ಹಂತಗಳಲ್ಲೇ ಬೆನ್ನು ನೋವಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದೇ ಉತ್ತಮ. ದಿನ ನಿತ್ಯದ ಚಟುವಟಿಕೆಗಳಲ್ಲಿ ಬದಲಾವಣೆ, ಯೋಗ, ವ್ಯಾಯಾಮಗಳಿಂದಲೂ ಬೆನ್ನು ನೋವಿನಿಂದ ದೂರವಿರಲು ಸಾಧ್ಯವಿದೆ. ಕೋಲ್ಡ್ ಥೆರಪಿ ಟ್ರೈ ಮಾಡಿ ಬೆನ್ನು ನೋವು ಸಹಿಸಲಾಗದ ಯಾತನೆ ನೀಡುತ್ತದೆ. ದಿನ ನಿತ್ಯದ ಕೆಲಸಕ್ಕೂ ತೊಂದರೆ ಮಾಡುತ್ತದೆ. ಇದಕ್ಕಾಗಿ, ನೋವಿರುವ ಜಾಗಕ್ಕೆ, ತಂಪಾದ ನೀರು ಅಥವಾ ಐಸ್ ಪ್ಯಾಕ್‌ನಿಂದ ಶೇಖ ನೀಡಿದರೆ ನೋವು ಕಡಿಮೆಯಾಗುವಲ್ಲಿ ಸಹಾಯವಾಗುತ್ತದೆ. ಹೀಟ್ ಥೆರಪಿ ಬಿಸಿ ಶೇಖ ನೀಡುವುದು ಇನ್ನೊಂದು ಪರಿಹಾರ. ಆದರೆ ಇದರಲ್ಲಿ ಅನೇಕ ವಿಧ, ವಿಧಾನಗಳೂ ಇವೆ. ವಾಟರ್ ಬ್ಯಾಗ್, ಹೀಟಿಂಗ್ ಪ್ಯಾಡ್, ಬಿಸಿ ನೀರಿನ ಟಬ್ ಬಾತ್‌ನ ಮೂಲಕ ನೋವಿರುವ ಜಾಗಕ್ಕೆ ಹೆಚ್ಚು ಬಿಸಿ ಮುಟ್ಟಿಸುವುದರಿಂದಲೂ ನೋವು ಕೊಂಚ ಮಟ್ಟಿಗೆ ನಿವಾರಣೆಯಾಗುತ್ತದೆ. ವ್ಯ...