Posts

Showing posts from December, 2023

BIG Alert: ರಾಜ್ಯದ 'LPG ಗ್ಯಾಸ್ ಬಳಕೆದಾರ'ರ ಗಮನಕ್ಕೆ: 'ಆಧಾರ್ E-KYC'ಗೆ ಅಂತಿಮ ದಿನಾಂಕ ನಿಗದಿಪಡಿಸಿಲ್ಲ

Image
  ಎಲ್ ಪಿಜಿ ಗ್ಯಾಂಸ್ ಸಂಪರ್ಕ ಪಡೆದಂತ ಗ್ರಾಹಕರಿಗೆ ಆಧಾರ್ ಸಂಖ್ಯೆ ನೀಡಿ ಇ-ಕೆವೈಸಿ ಅಪ್ ಡೇಟ್ ಮಾಡೋದಕ್ಕೆ ಸೂಚಿಸಲಾಗಿತ್ತು. ಅಲ್ಲದೇ ಅದರ ಗಡುವು ಡಿ.31ಕ್ಕೆ ಮುಕ್ತಾಯವಾಗಲಿದೆ. ಆ ನಂತ್ರ ಸಬ್ಸಿಡಿ ಸಿಗೋದಿಲ್ಲ ಅಂತ ಸುದ್ದಿಗಳು ವೈರಲ್ ಆಗಿತ್ತು. ಆದ್ರೇ ಎಲ್ ಪಿಡಿ ಗ್ಯಾಸ್ ಸಂಪರ್ಕಕ್ಕೆ ಇ-ಕೆವೈಸಿ ಅಪ್ ಡೇಟ್ ಮಾಡೋದಕ್ಕೆ ಅಂತಿಮ ದಿನಾಂಕ ನಿಗದಿ ಪಡಿಸಿಲ್ಲ ಅಂತ ಆಹಾರ ಇಲಾಖೆ ಸ್ಪಷ್ಟ ಪಡಿಸಿದೆ ಈ ಕುರಿತಂತೆ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಅಡುಗೆ ಅನಿಲ ಸಂಪರ್ಕ ಹೊಂದಿರುವವರು ಆಧಾರ್ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕವನ್ನು ಕೇಂದ್ರ ಸರ್ಕಾರವು ನಿಗಧಿಪಡಿಸಿರುವುದಿಲ್ಲ. ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಆಧಾರ್ ಇ-ಕೆವೈಸಿ ಮಾಡಿಸಬಹುದಾಗಿದ್ದು, ಸಾರ್ವಜನಿಕರು ಆತಂಕದಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದೆ. ಆದ್ದರಿಂದ ಅನಾವಶ್ಯಕವಾಗಿ ಗೊಂದಲ ಅಥವಾ ತಪ್ಪು ಮಾಹಿತಿಯಿಂದ ಗ್ಯಾಸ್ ಏಜೆನ್ಸಿಗಳ ಬಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ ಹಾಗೂ ಸಿಲಿಂಡರ್‍ನ್ನು ಮನೆಗೆ ಡೆಲಿವರಿ ಪಡೆಯುವ ವೇಳೆಯಲ್ಲಿ ಕೂಡ ಇ-ಕೆವೈಸಿ ಮಾಡಿಸಲು ಅವಕಾಶವಿರುತ್ತದೆ. ಅಲ್ಲದೇ ಹೆಲೋ ಬಿಪಿಸಿಎಲ್, ಇಂಡಿಯನ್ ಆಯ್ಲ್ ಒನ್ ಮತ್ತು ವಿಟ್ರನ್ ಹೆಚ್‍ಪಿ ಗ್...

ಕುವೆಂಪು ಕಂಡರೆ ಮನುವಾದಿಗಳಿಗೇಕೆ ಉರಿ?

Image
*ಕುವೆಂಪು ಕಂಡರೆ ಮನುವಾದಿಗಳಿಗೇಕೆ ಉರಿ?*  ಕುವೆಂಪು ಮನುವಾದಿಗಳ ಪಾಲಿಗೆ ಯಾವತ್ತಿಗೂ ಸಿಂಹಸ್ವಪ್ನ. ಈ ಭಯ-ಆತಂಕಗಳೇ ಮನುವಾದಿಗಳನ್ನು ಒಳಗೊಳಗೇ ಉರಿದು ಬೀಳುವಂತೆ ಮಾಡುತ್ತಿವೆ. ಅಷ್ಟಕ್ಕೂ ಮನುವಾದಿಗಳಿಗೆ ಕುವೆಂಪು ಸಿಂಹಸ್ವಪ್ನವೇಕೆ ಎಂಬುದನ್ನು ಮುಂದೆ ನೋಡಿ.  ಕುವೆಂಪು ಅವರ ಕಾವ್ಯದ ಈ ಸಾಲುಗಳನ್ನು ಒಮ್ಮೆ ಓದಿ... "ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು' *ಮನುವನ್ನು ಮತ್ತು ಮನುವಾದವನ್ನು ಧಿಕ್ಕರಿಸುವ ಮಾತುಗಳಿವು* . ಇಷ್ಟು ಅರ್ಥ ಮಾಡಿಕೊಂಡರೆ ಸಾಕು ಮನುವಾದಿಗಳು ಜಾರಿಗೆ ತಂದ ಮೌಢ್ಯಾಚರಣೆಗಳು ಮೂಲೆಗುಂಪಾಗುತ್ತವೆ. ಇವು ಮೂಲೆಗುಂಪಾದರೆ ಅವರ ಪೌರೋಹಿತ್ಯ ಮತ್ತು ಇತರೆ ಮೌಢ್ಯಾಧಾರಿತ ಕುಲಕಸುಬುಗಳು ಇಲ್ಲವಾಗುತ್ತವೆ.  ಸಮಾನತೆ, ವಿಶ್ವಮಾನವತೆ ಸಾರುವ ಹಾಗೂ ಮೌಢ್ಯದ ಕಟ್ಟುಪಾಡುಗಳನ್ನು ಕಿತ್ತೆಸೆಯಲು ಕರೆ ನೀಡುವ ಕುವೆಂಪು ಸಾಹಿತ್ಯ ಜನರಿಗೆ ಹೆಚ್ಚೆಚ್ಚು ಅರ್ಥವಾದಂತೆಲ್ಲಾ ಮನುವಾದಿಗಳು ತಮ್ಮ ಮೇಲ್ಪಂಕ್ತಿಯನ್ನು ಕಳೆದುಕೊಳ್ಳುತ್ತಾರೆ.  ಇದೇ ಮನುವಾದಿಗಳ ಭಯಕ್ಕೆ ಮೂಲ ಕಾರಣ. ಈ ಭಯಕ್ಕೇ ಕುವೆಂಪು ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. *ಹೆಸರು ಕುಗ್ಗಿಸಿದ ನಂತರ ಅವರ ಸಾಹಿತ್ಯವನ್ನು ದೂರ ಇಡುತ್ತಾರೆ* . *ಮನುವಾದಿಗಳ ಬುಡ ಅಲುಗಾಡಿಸುವ ಸಾಹಿತ್ಯ ಜನರನ್ನು ತಲುಪಬಾರದು ಎಂಬುದು ಇವರ ಅಜೆಂಡಾ* . ಹಾ...

ಮಾನವತ್ವದ ಪ್ರಬಲ ಧ್ವನಿ

Image
  ಇಂದು ರಾಷ್ಟ್ರಕವಿ ಕುವೆಂಪು ಜನ್ಮದಿನ ಧಾರ್ಮಿಕ ವಿಧಾನಗಳಿಗೆ ಧಾರ್ಮಿಕ ಕೇಂದ್ರಗಳು ಬಳಕೆಯಾಗದೆ ಜನಸಮು ದಾಯಗಳಸಕಾರಾತ್ಮಕ ಸ್ಥಿತ್ಯಂತರಕ್ಕೆ ಮುನ್ನುಡಿ ಬರೆದು, ಮನುಷ್ಯ ಸುಧಾರಣೆಯ ದೃಢ ಹೆಜ್ಜೆಗಳನ್ನು ಪ್ರಕಟಿಸಿ, ಸರ್ವರೂ ಭಗವಂತನ ಸೃಷ್ಟಿ ಎನ್ನುವ ನೈಜ ಸತ್ಯ ರೂಪಿಸುವತ್ತ ಕಾರ್ಯೋನ್ಮುಖವಾಗಲಿ ಎನ್ನುವ ಸದಾಶಯವನ್ನು ಹೊಂದಿದ್ದರು  ಇಂದು ವಿಶ್ವಮಾನವ ದಿನಾಚರಣೆಯನ್ನು ಇಡೀ ನಾಡಿನಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಕನ್ನಡ ಸಾಹಿತ್ಯಕ್ಕೊಂದು ಚಲನಶೀಲತೆ, ಗತಿಶೀಲತೆ ತಂದುಕೊಟ್ಟ ಕನ್ನಡ ಸಾಹಿತ್ಯದ ತಪಸ್ವಿ ಕುವೆಂಪು ಅವರ ಜನ್ಮದಿನವನ್ನು ವಿಶ್ವ ಮಾನವ ದಿನವಾಗಿ ಆಚರಿಸಲಾಗುತ್ತದೆ. ಬಹು ಆಯಾಮಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಸೃಜನಶೀಲತೆಯನ್ನು ತುಂಬಿದವರು. ಸಾಹಿತ್ಯವನ್ನು ಕವಿತೆ, ಕವನ, ನಾಟಕ, ಕಾದಂಬರಿ ಪರಿಧಿಯಿಂದ ನೋಡದೆ ಕನ್ನಡ ಸಾಹಿತ್ಯವನ್ನು ಜನಭಾಷೆಯನ್ನಾಗಿ ನಿರೂಪಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಹಾಗಾಗಿ ಕುವೆಂಪು ಅವರನ್ನು ಕವಿ, ನಾಟಕಕಾರ, ರಚನಾಕಾರ ನೆಲೆಯಿಂದ ಗ್ರಹಿಸದೆ, ಸಾಹಿತ್ಯದ ಹೊಸ ಆಲೋಚನಾ ಕ್ರಮ ಎನ್ನುವ ವಿಸ್ತಾರದ ದೃಷ್ಟಿಯಿಂದ ಇಂದಿನ ಯುವಸಮುದಾಯ ಭಾವಿಸಬೇಕಿದೆ. ಬಹುತ್ವದ ಭಾರತಕ್ಕೆ ಬೇಕಾಗುವ ಮೌಲಿಕವಾದ ಸಾರ್ವಕಾಲಿಕವಾದ ಚಿಂತನೆಗಳನ್ನು ರೂಪಿಸಿ, ಸಮಗ್ರತೆಯ ಬೀಜವನ್ನು ಬಿತ್ತಿ ಸಮಾನತೆಯ ವಾತಾವರಣವನ್ನು ಹುಟ್ಟುಹಾಕಿದ ಕುವೆಂಪು ಶ್ರೇಣೀಕರಣವನ್ನು ವಿರೋಧಿಸಿದವರು. ಭವಿಷ್ಯದ ದಾರಿ...

ಮೊಡವೆ (ಪಿಂಪಲ್ಸ್)" ಬಗ್ಗೆ ಆರೋಗ್ಯ ಮಾಹಿತಿ*

Image
      ಮಾನವನ ಸೌಂದರ್ಯವನ್ನು ಸೂಚಿಸುವ ಅಂಗಗಳಲ್ಲಿ *ಚರ್ಮ*ವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ *ಮುಖ* ವು ದೇಹದ ಅಂದವನ್ನು ಪ್ರತಿಬಿಂಬಿಸುವ ಕನ್ನಡಿ ಇದ್ದ ಹಾಗೆ. ಮುಖದ ಮೇಲೆ ಯಾವುದೇ ರೀತಿಯ ಒಂದು ಸೂಕ್ಷ್ಮ ನ್ಯೂನತೆ ಮುಖದ ಸೌಂದರ್ಯಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. *ಹದಿಹರೆಯ* ದವರಲ್ಲಿ ಸೌಂದರ್ಯಕ್ಕೆ ಉಂಟು ಮುಖ್ಯವಾದ ಚರ್ಮದ ತೊಂದರೆ *ಮೊಡವೆ.* ಇದು ಕೆಲವರಲ್ಲಿ ಮಾತ್ರ ಕಂಡುಬರುತ್ತದೆ; ಇನ್ನು ಕೆಲವರಲ್ಲಿ ಇರುವುದಿಲ್ಲ. ನಿಜವಾದ ಕಾರಣಗಳು ಇದ್ದರೂ ಹಲವು ಸಿದ್ಧಾಂತಗಳು ಇದರ ಉದ್ಭವಕ್ಕೆ ಸರಿಹೋಲುತ್ತವೆ. *ಸಾಮಾನ್ಯವಾದ ಪ್ರಜೆಯಿಂದ, ಅನೇಕ ಸಿನಿಮಾ ತಾರೆಯರು, ಮಾಡೆಲ್ ಗಳು ಹಾಗೂ "ಸೌಂದರ್ಯ ರಾಣಿ (ಬ್ಯೂಟಿ ಕ್ವೀನ್ಸ್)"* ಯಾರ ಮೊಡವೆಯಿಂದ ತಪ್ಪಿಸಿಕೊಂಡಿಲ್ಲ. ಕೆಲವರಲ್ಲಿ ಮೊಡವೆ ಸಾಧಾರಣ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತದೆ, ಮತ್ತೆ ಅನೇಕರಲ್ಲಿ ಇದರ ಸ್ವರೂಪ ತುಂಬಾ ಉಲ್ಭಣಗೊಂಡು ಮಾನಸಿಕ ವೇದನೆಯನ್ನು ಉಂಟು ಮಾಡುವುದರಲ್ಲಿ ಸಂಶಯವೇ ಇಲ್ಲ. ಹದಿಹರೆಯದವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ *"ಪ್ರಾಯದ ಬಕ್ಕೆ"* ಅಥವಾ *"ಪ್ರಾಯದ ಸಂಕೇತ"* ಎಂದರೆ ತಪ್ಪಾಗಲಾರದು. ಮೊಡವೆಯನ್ನು ಶರೀರದ ಭೌತಿಕ ಕ್ರಿಯೆಯನ್ನು ಒಂದು ಅತಿರೇಕ ಎಂದರೆ ಅತಿಶಯೋಕ್ತಿಯಲ್ಲ ಎಂದು ಭಾವಿಸಬಹುದು. ಇದನ್ನು ಸಾಮಾನ್ಯವಾಗಿ *"ಆಕ್ನೆ ವಲ್ಗ್ಯಾರಿಸ್ (ಮೊಡವೆ ವಲ್ಗ್ಯಾರಿಸ್)"* ಎಂದು ಕರೆಯುತ್ತಾ...

ಯುವ ನಿಧಿಗೆ ಅರ್ಜಿ ಹಾಕಲು ಕಡ್ಡಾಯವಾಗಿ ಇರಬೇಕಾದ ದಾಖಲೆಗಳು

Image
  ಅರ್ಹತೆಯ ಮಾನದಂಡಗಳು : 1) ಕಡ್ಡಾಯವಾಗಿ ಡಿಪ್ಲೋಮ/ಪದವಿ ತೇರ್ಗಡೆಯಾದ ವಿದ್ಯಾರ್ಥಿ ಕರ್ನಾಟಕದಲ್ಲಿ ಕನಿಷ್ಠ ಅಂದ್ರು ಆರು ವರ್ಷ ಓದಿರಬೇಕು 2) ಕಡ್ಡಾಯವಾಗಿ ಡಿಪ್ಲೋಮಾ ಅಥವಾ ಪದವಿಯನ್ನು 2023ನೇ ವರ್ಷದಲ್ಲಿ ಮಾತ್ರ ಪೂರೈಸಿರಬೇಕು. 3) ಪದವಿ ಪೂರೈಸಿ 180 ದಿನಗಳು ಮಾತ್ರ ಸದರಿಯವರು ಈ ಯೋಜನೆಯಲ್ಲಿ ಫಲಾನುಭವಿಗಳ ಸೇವೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.  4) ಇತ್ತೀಚಿಗೆ ತೆರಗಡೆಯಾದ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು ಆದರೆ ಅವರಿಗೆ ಸರಕಾರದಿಂದ ಸಿಗುವ ಆಶೀರ್ವಾದ ದುಡ್ಡು ಆರು ತಿಂಗಳು ಕಳೆದ ನಂತರ ಮಾತ್ರ ಸಿಗುತ್ತದೆ.  5) ಆರು ವರ್ಷಗಳ ಕಾಲ ಓದಿದ್ದೇನೆ ಎಂದು ಹೇಳಲು ಸದರಿ ಕರ್ನಾಟಕ ವಿದ್ಯಾರ್ಥಿಗಳು ಸರ್ಟಿಫಿಕೇಟ್, ಸಿಟಿ ನಂಬರ್, ರೇಷನ್ ಕಾರ್ಡ್ ಮುಂತಾದವುಗಳಿಗೆ ಅರ್ಜಿ ಸಲ್ಲಿಸಬಹುದು.  6) ಸದರಿ ಯೋಜನೆ ಅಡಿ ಫಲಾನುಭವಿಗಳ ಸೇವೆಗಳನ್ನು ಪಡೆದುಕೊಳ್ಳಲು ಯಾವುದೇ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಸ್ವಯಂ ಉದ್ಯೋಗಿ ಇದ್ದವರು ಅನರ್ಹರಾಗಿರುತ್ತಾರೆ.  7) ಡಿಗ್ರಿಯನ್ನು ಮುಗಿಸಿ PG ಹೆಚ್ಚಿನ ವ್ಯಾಸಂಗಕ್ಕೆ ಹೋಗುವ ಈ ಯೋಜನೆಯ ಸೇವೆ ಸಿಗುವುದಿಲ್ಲ. 8) ಇಎಸ್ಐ ಪಿಎಫ್ ಸರ್ಕಾರದಿಂದ ಪಿಂಚಣಿ ಪಡೆಯುವ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಲ್ಲ 9) ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಲಿಂಕ್ ಮತ್ತು ಬ್ಯಾಂಕ್ ಖಾತೆ ಆಧಾರ್ ಸಿಡಿಂಗ್ ...

ಇಂದು ಹೊಸ್ತಿಲ ಹುಣ್ಣಿಮೆ 973ನೇ ಶ್ರೀ ಶಿವಶರಣ ಮಾದರ ಚೆನ್ನಯ್ಯ ಜಯಂತ್ಯೋತ್ಸವದ ಅಂಗವಾಗಿ ಈ ವಿಶೇಷ ಲೇಖನ

Image
 🌹ಮಾದಿಗ ಸಮುದಾಯದ ಪರಂಪರೆ🌹* *🌸ಶಿವಶರಣ ಶ್ರೀ ಮಾದರ ಚನ್ನಯ್ಯ🌸*      *ಕಂಚಿ* ಜನರಿಗೆ ರಾಜ್ಯವಾಳುತ್ತಿದ್ದ *ಕರಿಕಾಲ ಚೋಳ* ರಾಜನ ಕುದುರೆಗಳಿಗೆ ಹುಲ್ಲು ತಂದು ಒದಗಿಸುವವನು *ಮಾದಾರ ಚೆನ್ನಯ್ಯ.*ಕಾಯವನು *ಮಾದಾರ* ಜಾತಿಗೆ ಸೇರಿದವನು. ಹುಲ್ಲು ತರುವ ಕೂಲಿಕಾರನಾಗಿ ಚೋಳ ರಾಜನ ಆಶ್ರಯದಲ್ಲಿ ಜೀವನ ನಡೆಸುತ್ತಿದ್ದನು. ಪ್ರತಿ ನಿತ್ಯ ಜೊತೆಯವರನ್ನು ಕರೆದುಕೊಂಡು ಹೋಗುವುದು, ಎಲ್ಲರೂ ಸೇರಿ ಹುಲ್ಲು ಕೊಯ್ದು ಹೊರೆ ಕಟ್ಟಿಕೊಂಡು ಬರುವುದು, ರಾಜನ ಕುದುರೆಗಳಿಗೆ ಹುಲ್ಲು ಹಾಕಿ ಸಾಕುವುದು *ಚೆನ್ನಯ್ಯನು ಪ್ರಾಪಂಚಿಕವಾಗಿ ಮಾಡುವ ಕಾಯಕ.*      ಎಲ್ಲರಿಗೂ ಕಾಣುವಂತೆ ತನ್ನ *ಕುಲಕರ್ಮ* ಅಂದರೆ ಕೂಲಿಕಾರನಾಗಿ ಹುಲ್ಲು ಕೊಯ್ದು ತರುತ್ತಿದ್ದರೂ ಶಿವನನ್ನೇ ಧ್ಯಾನಿಸುತ್ತಾ ತಾನು ಮಾಡಿದ ಎಲ್ಲ ಕಾರ್ಯವನ್ನು ಶಿವನಿಗರ್ಪಿಸುತ್ತ ಕಾಲ ಕಳೆಯುತಿದ್ದವನು ಮಾದಾರ ಚೆನ್ನಯ್ಯ. ಹುಲ್ಲು ಕೊಯ್ಯುವಾಗ ಬಹಿರಂಗವಾಗಿ ಶಿವನ ನೆನಹು, ಆಮೇಲೆ ಅಂತರಂಗದಲ್ಲಿ ಲಿಂಗಾರ್ಚನೆ ಮಾಡುತ್ತಿದ್ದ ಚೆನ್ನಯ್ಯ ಹುಲ್ಲು ತಂದು ಕುದುರೆಗಳಿಗೆ ಹಾಕಿದ ನಂತರ ತನ್ನ ಗುಡಿಸಲು ಕಡೆಗೆ ಹೋಗುತ್ತಿದ್ದನು.       ಚೆನ್ನಯ್ಯನ ಹೆಂಡತಿ ಸಾಧ್ವೀಮಣಿ ಅಂಬಲಿ ಮಾಡಿ ಗಂಡನಿಗಾಗಿ ಕಾಯುತ್ತಿದ್ದಳು. ಚೆನ್ನಯ್ಯ ಮನೆಗೆ ಬಂದು ಲಿಂಗ ಪೂಜೆಗೆ ಅಣಿ ಮಾಡಿಕೊಂಡ, ತನ್ನ ಇಷ್ಟಲಿಂಗವನ್ನು ಕರಸ್ಥಳದಲ್ಲಿರಿಸಿ ಆಘ್ಯದ ನೀರೆದು ತೀರ್ಥವನ್...

ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆ 2023-24

Image
  ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ (PM-Vishvakarma-2023) ಯೋಜನೆಗಳ ಅಡಿಯಲ್ಲಿ  ಮೊದಲ ಬಾರಿಗೆ ₹1 ಲಕ್ಷ ಸಾಲ ಬಡ್ಡಿ 5% ಕಡಿಮೆ ದರದಲ್ಲಿ.ಅವಧಿ 18 ತಿಂಗಳೊಳಗೆ ಹಿಂತಿರುಗಿದರೆ ಮತ್ತೆ 2 ಲಕ್ಷ.  ತದ ನಂತರ ₹3 ಲಕ್ಷ ಸಾಲ ಪಡೆಯಿರಿ. ಬ್ಯಾಂಕ್ ಯಾವದೇ ಗ್ಯಾರಂಟಿ ಇಲ್ಲ. 5 ರಿಂದ 15 ದಿನಗಳ ತರಬೇತಿಯಲ್ಲಿ ಪ್ರತಿದಿನ ರೂ.500/- ಭತ್ಯೆ ಜೊತೆಗೆ ಸಹಾಯ ಧನ ಸಬ್ಸಿಡಿ ರೂಪದಲ್ಲಿ ₹15,000 ಗಳ ಉಪಕರಣಗಳನ್ನು ಖರೀದಿಸಿ GST ನೋಂದಾಯಿತ ಅಂಗಡಿಯ ಬಿಲ್ಲು ಕೊಟ್ಟರೆ.  ಯಾರೆಲ್ಲ ಅರ್ಜಿ ಸಲ್ಲಿಸಬಹುದು ಟೈಲರ್ ಬಟ್ಟೆ ಹೊಲೆಯುವ ದರ್ಜಿಗಳು ಬಡಿಗ ವೃತ್ತಿ ಮಾಡುವವರು ದೋಣಿ ತಯಾರಿಸುವವರು ಶಸ್ತ್ರ ತಯಾರಕರು ಕಮ್ಮಾರ ವೃತ್ತಿ ಮಾಡುವವರು ಕಲ್ಲುಕುಟಗ ವೃತ್ತಿ ಮಾಡುವವರು ಬಟ್ಟೆ ಚಾಪೆ-ಕಸ ಪೊರಕೆ ತಯಾರಕರು ಗೊಂಬೆ ಮತ್ತು ಆಟಿಕೆ ತಯಾರಕರು (ಸಂಪ್ರದಾಯಿಕ) ಕ್ಷೌರಿಕ ವೃತ್ತಿ ಮಾಡುವವರು ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು ಹೂಮಾಲೆ ತಯಾರಕರು ಅಗಸರು (ದೋಬಿ) ಆಭರಣ ತಯಾರಕರು ಶಿಂಪಿಗ (ಬಟ್ಟೆ ಹೊಲೆಯುವರು) ಕುಂಬಾರ ವೃತ್ತಿ ಮಾಡುವವರು ಮೀನು ಬಲೆ ಹೆಣೆಯುವವರು ಶಿಲ್ಪಿ (ಮೂರ್ತಿ ಮತ್ತು ಕಲ್ಲಿನ ಕೆತ್ತನೆ) ಚಮ್ಮಾರ ಪಾದರಕ್ಷೆ ತಯಾರಕ                 ಬೀಗ ತಯಾರಕರು #pmvks #pradhamantri

ಪಂಚಾಯಿತಿ ವ್ಯವಸ್ಥೆ ನಡೆದು ಬಂದ ದಾರಿ

Image
ಪಂ ಚಾಯತಿ ಎಂಬುದು ಬಹಳ ಹಿಂದಿನಿಂದಲೂ ನಡೆದು ಬಂದಿರುವಪಂಚಾಯತಿ ಎಂಬುದು ಬಹಳ ಹಿಂದಿನಿಂದಲೂ ನಡೆದು ಬಂದಿರುವ ಒಂದು ವ್ಯವಸ್ಥೆ ಬಹಳ ಹಿಂದೆಯೇ ಪಂಚರು ಪಂಚಾಯಿತಿಗಳ ಮುಖ್ಯಸ್ಥರಾಗಿ. ಹಳ್ಳಿಗಳಲ್ಲಿ ಇಂತಹ ಪಂಚಾಯಿತಿಗಳು ಇದ್ದವು ಸಾಮಾಜಿಕವಾಗಿ ಆರ್ಥಿಕವಾಗಿ ಪ್ರಬಲರಾದವರು ಮಾತ್ರ ವಂಶ ಪಾರಂಪರಿಕವಾಗಿ ಪಂಚರಾಗಿ ಅಧಿಕಾರ ನಡೆಸಲು ಅವಕಾಶವಿತ್ತು. ಈ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ ಸಿಗದ ಆರೋಪಗಳಿವೆ ಸಿರಿವಂತರು ಶಕ್ತಿವಂತರು ನ್ಯಾಯಯುತವಾಗಿ ಬಿಡುತ್ತಾರೆ ಅವರ ಅಭಿಪ್ರಾಯಗಳನ್ನು ಸಾಮಾನ್ಯ ಜನರು ವಿರೋಧಿಸುವ ಹಾಗಿಲ್ಲ  ರಾಜ ಮಹಾರಾಜರ ಕಾಲದಲ್ಲಿ ಇಂತಹ ಆಡಳಿತ ವ್ಯವಸ್ಥೆ ನಮ್ಮ ಹಳ್ಳಿಗಳಲ್ಲಿ ನಡೆಯುತ್ತಿರುವ ಬ್ರಿಟಿಷರು ಬಂದ ಮೇಲೂ ಇದು ರಾಜ ಮಹಾರಾಜರ ಕಾಲದಲ್ಲಿ ಇಂತಹ ಆಡಳಿತ ವ್ಯವಸ್ಥೆ ನಮ್ಮ ಹಳ್ಳಿಗಳಲ್ಲಿ ನಡೆಯುತ್ತಿತ್ತು ಆದರೆ 1884 ರಲ್ಲಿ ಬ್ರಿಟಿಷರು ಸ್ಥಳೀಯ ಸರ್ಕಾರಕ್ಕೆ ಆಡಳಿತಾತ್ಮಕ ರೂಪ ಕೊಡುವ ಪ್ರಯತ್ನ ಮಾಡಿದರು ಒಂದು ಜಿಲ್ಲೆಯನ್ನು ಆಡಳಿತವಾಗಿ ರೂಪಿಸಿದರು ಈ ವ್ಯವಸ್ಥೆಗೆ ಲೋಕ ನಿಧಿ ಸಮಿತಿ ಕರೆಯಲಾಯಿತು. ಜಿಲ್ಲಾ ಕಮಿಷನರ್ ಅಧ್ಯಕ್ಷ ಈ ಸಮಿತಿಯಲ್ಲಿ ಅಧಿಕಾರಿಗಳು ಇನಾಂದಾರರು ) ಮತ್ತು ಭೂ ನೇಮಕಗೊಂಡ ಜನಪ್ರತಿನಿಧಿಗಳು  ಅಂದಿನ ಮೈಸೂರು ಪ್ರಾಂತ್ಯದಲ್ಲಿ ದಿ ಮೈಸೂರ್ ಲೋಕಲ್ ರೆಗ್ಯುಲೇಶನ್ ಜಾರಿಗೆ ತರಲಾಯಿತು. ಈ ಕಾಯ್ದೆಯ ಪ್ರಕಾರ ಮೂರು ಹಂತಗಳಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆ ಜಾರಿಗೆ ಬಂದಿದೆ  ಜಿಲ್ಲಾ ಜ...

ಬದುಕಿದಾಗ ಒಂದು ಗುಲಾಬಿ ಕೊಡಬಾರದೆ?

Image
  ಇದು *ಅಮೆರಿಕದಲ್ಲಿ* ನಡೆದ ನಿಜ ಜೀವನದ ಘಟನೆಯಂತೆ.  ಆ *ಗಂಡ ಹೆಂಡತಿ* ಇಬ್ಬರೂ ಪ್ರೀತಿಸಿ ಮದುವೆಯಾದರು. 20 ವರ್ಷಗಳ ಕಾಲ ಹೇಗೋ ಏನೋ *ಗಂಡ- ಹೆಂಡಿರಂತೆ* ಜೀವನ ಇದೆ. ಆತನಿಗೆ ಬಿಡುವಿಲ್ಲದಷ್ಟು *ಕೆಲಸ*. ಮನೆಯ ಕಡೆ, ಮಡದಿಯ ಕಡೆ, ಸ್ವಲ್ಪ ಗಮನ ಕಡಿಮೆ.  ಇದ್ದಕ್ಕಿದ್ದಂತೆ ಒಂದು ದಿನ *ಹೆಂಡತಿ* ಕೇಳಿದಳು. “*ನಾನು ಇಂದು ಸತ್ತರೆ ನನ್ನ ಅಂತ್ಯಕ್ರಿಯೆ ಹೇಗೆ ಮಾಡುತ್ತೀಯ*?” ದಿಡೀರ್ ಪ್ರಶ್ನೆಯಿಂದ ಸ್ವಲ್ಪ ವಿಚಲಿತನಾದ *ಗಂಡ* ಸಾವರಿಸಿಕೊಂಡು ಉತ್ತರಿಸಿದ. “ *ತುಂಬಾ ಪುಷ್ಪಗುಚ್ಛಗಳು, ಬೆಲೆಬಾಳುವ ಶವ ಪೆಟ್ಟಿಗೆ, ನಿನ್ನ ಗುಣಗಾನ ಮಾಡಿ ಆತ್ಮಕ್ಕೆ ಶಾಂತಿಯನ್ನು ಕೋರುವ ಪ್ರಾರ್ಥನಾ ಸಭೆಗಳು*, ಮುಂತಾದವು ಎಲ್ಲ ಇರುತ್ತವೆ.  ಏಕೆ ಈ ಪ್ರಶ್ನೆ ? *ಹೆಂಡತಿ* ಪ್ರಶ್ನಿಸಿದಳು, “*ತುಂಬಾ ಖರ್ಚಾಗುವುದಿಲ್ಲವೇ*”  *ಗಂಡ* ಹೇಳಿದ *ಹತ್ತಾರು ಸಾವಿರ ಡಾಲರ್ ಖರ್ಚಾಗಬಹುದು, ಆದರೆ ಅದು ನನ್ನ ಕರ್ತವ್ಯವಲ್ಲವೇ*?   *ಹೆಂಡತಿ* ಹೇಳುತ್ತಾಳೆ “*ನಾನು ಸತ್ತ ಮೇಲೆ ನೀವು ಕೊಡುವ ಸಾವಿರಾರು ಡಾಲರ್ ಬೆಲೆ ಬಾಳುವ ಪುಷ್ಪಗುಚ್ಛಗಳು ನಾನು ನೋಡುವುದಿಲ್ಲ ,ಗುಣಗಾನದ ಮಾತುಗಳನ್ನು ಕೇಳಲು ಸಾಧ್ಯವಿಲ್ಲ, ಇವೆಲ್ಲವೂ ನನಗೇನು ಪ್ರಯೋಜನವಾಗುವುದಿಲ್ಲ. ಏಕೆಂದರೆ ನಾನು ಕಳೆಬರವಾಗಿರುತ್ತೇನೆ. ಅದರ ಬದಲು ನಾನು ಬದುಕಿರುವಾಗಲೇ ಒಂದು ಗುಲಾಬಿ ಹೂ ಕೊಡಬಾರದೆ, ಒಂದು ಪ್ರೀತಿಯ ಮಾತು ಆಡಬಾರದೇ*,  ಈ ಮುಗ್ಧ ಮಾತು ಗಂಡನ ...