ಪಂಚಾಯಿತಿ ವ್ಯವಸ್ಥೆ ನಡೆದು ಬಂದ ದಾರಿ

ಪಂಚಾಯತಿ ಎಂಬುದು ಬಹಳ ಹಿಂದಿನಿಂದಲೂ ನಡೆದು ಬಂದಿರುವಪಂಚಾಯತಿ ಎಂಬುದು ಬಹಳ ಹಿಂದಿನಿಂದಲೂ ನಡೆದು ಬಂದಿರುವ ಒಂದು ವ್ಯವಸ್ಥೆ ಬಹಳ ಹಿಂದೆಯೇ ಪಂಚರು ಪಂಚಾಯಿತಿಗಳ ಮುಖ್ಯಸ್ಥರಾಗಿ. ಹಳ್ಳಿಗಳಲ್ಲಿ ಇಂತಹ ಪಂಚಾಯಿತಿಗಳು ಇದ್ದವು ಸಾಮಾಜಿಕವಾಗಿ ಆರ್ಥಿಕವಾಗಿ ಪ್ರಬಲರಾದವರು ಮಾತ್ರ ವಂಶ ಪಾರಂಪರಿಕವಾಗಿ ಪಂಚರಾಗಿ ಅಧಿಕಾರ ನಡೆಸಲು ಅವಕಾಶವಿತ್ತು. ಈ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ ಸಿಗದ ಆರೋಪಗಳಿವೆ ಸಿರಿವಂತರು ಶಕ್ತಿವಂತರು ನ್ಯಾಯಯುತವಾಗಿ ಬಿಡುತ್ತಾರೆ ಅವರ ಅಭಿಪ್ರಾಯಗಳನ್ನು ಸಾಮಾನ್ಯ ಜನರು ವಿರೋಧಿಸುವ ಹಾಗಿಲ್ಲ

 ರಾಜ ಮಹಾರಾಜರ ಕಾಲದಲ್ಲಿ ಇಂತಹ ಆಡಳಿತ ವ್ಯವಸ್ಥೆ ನಮ್ಮ ಹಳ್ಳಿಗಳಲ್ಲಿ ನಡೆಯುತ್ತಿರುವ ಬ್ರಿಟಿಷರು ಬಂದ ಮೇಲೂ ಇದು ರಾಜ ಮಹಾರಾಜರ ಕಾಲದಲ್ಲಿ ಇಂತಹ ಆಡಳಿತ ವ್ಯವಸ್ಥೆ ನಮ್ಮ ಹಳ್ಳಿಗಳಲ್ಲಿ ನಡೆಯುತ್ತಿತ್ತು ಆದರೆ 1884 ರಲ್ಲಿ ಬ್ರಿಟಿಷರು ಸ್ಥಳೀಯ ಸರ್ಕಾರಕ್ಕೆ ಆಡಳಿತಾತ್ಮಕ ರೂಪ ಕೊಡುವ ಪ್ರಯತ್ನ ಮಾಡಿದರು ಒಂದು ಜಿಲ್ಲೆಯನ್ನು ಆಡಳಿತವಾಗಿ ರೂಪಿಸಿದರು ಈ ವ್ಯವಸ್ಥೆಗೆ ಲೋಕ ನಿಧಿ ಸಮಿತಿ ಕರೆಯಲಾಯಿತು. ಜಿಲ್ಲಾ ಕಮಿಷನರ್ ಅಧ್ಯಕ್ಷ ಈ ಸಮಿತಿಯಲ್ಲಿ ಅಧಿಕಾರಿಗಳು ಇನಾಂದಾರರು ) ಮತ್ತು ಭೂ ನೇಮಕಗೊಂಡ ಜನಪ್ರತಿನಿಧಿಗಳು

 ಅಂದಿನ ಮೈಸೂರು ಪ್ರಾಂತ್ಯದಲ್ಲಿ ದಿ ಮೈಸೂರ್ ಲೋಕಲ್ ರೆಗ್ಯುಲೇಶನ್ ಜಾರಿಗೆ ತರಲಾಯಿತು. ಈ ಕಾಯ್ದೆಯ ಪ್ರಕಾರ ಮೂರು ಹಂತಗಳಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆ ಜಾರಿಗೆ ಬಂದಿದೆ

  1.  ಜಿಲ್ಲಾ ಜಿಲ್ಲಾ ಮಂಡಳಿ
  2.  ತಾಲೂಕು ತಾಲೂಕು ಬೋರ್ಡ್
  3.  ಮಂಡಳಿ ಮಂಡಳಿ ಸಂಘಟನೆ

 ಆನಂತರದಲ್ಲಿ 1919ರಲ್ಲಿ ಅಂದಿನ ಮೈಸೂರು ಸರ್ಕಾರ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯ್ದೆಯನ್ನು ಜಾರಿಗೆ ತಂದಿತು ಈ ಕಾಯ್ದೆಯಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಯಿತು. ನಂತರದಲ್ಲಿ 1926 ರ ಕಾಯ್ದೆಯಲ್ಲಿ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಒತ್ತು ನೀಡಲಾಯಿತು ಆದರೆ 21 ದಾಟಿದ ಪುರುಷರಿಗೆ ಮಾತ್ರ ಮತದಾನದ ಅವಕಾಶ ಕಲ್ಪಿಸಿದ ಇತಿಹಾಸದಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಗಳಿಗೆ ಕಾರ್ಯದರ್ಶಿಗೆ ಅವಕಾಶ ನೀಡಲಾಯಿತು ಆದರೆ ಚುನಾಯಿತ ಸದಸ್ಯರು ಒಬ್ಬರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಬೇಕಾದ ಗ್ರಾಮ ಪಂಚಾಯಿತಿಯು ಎರಡು ಬಾರಿ ವಿಧಿಸುವ ಮೂಲಕ ಎರಡು ಬಾರಿ ವಿಧಿಸುವ ತೆರಿಗೆಯನ್ನು ವಾರ್ಷಿಕವಾಗಿ ನಿಗದಿಪಡಿಸಲಾಗಿದೆ ಗರಿಷ್ಠ 18 ದಿನಗಳು ಕೂಲಿಯ ಗ್ರಾಮ ಪಂಚಾಯಿತಿ ತೆರಿಗೆಯನ್ನು ವಸೂಲು ಮಾಡಬಹುದಾಗಿತ್ತು 1926ರ ಕಾಯ್ದೆ1952 ರವರೆಗೂ ನಮ್ಮ ದೇಶದ ಅನುಷ್ಠಾನದಲ್ಲಿತ್ತು.

 ಸ್ವತಂತ್ರ ನಂತರದಲ್ಲಿ.....

 ಸ್ವಾತಂತ್ರ್ಯ ನಂತರದಲ್ಲಿ ಮೈಸೂರು ಸ್ಥಳೀಯ ಆಡಳಿತ ವ್ಯವಸ್ಥೆಯ ಕೊರೆತಾಗಿ ಅಧ್ಯಯನ ನಡೆಸಲು ವೆಂಕಟಪ್ಪ ನೇತೃತ್ವದ ಸಮಿತಿ ಸ್ವಾತಂತ್ರ್ಯ ನಂತರ ಮೈಸೂರು ರಾಜ್ಯದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯ ಕೊರೆತಾಗಿ ಅಧ್ಯಯನ ನಡೆಸಲು ವೆಂಕಟಪ್ಪ ನೇತೃತ್ವದ ಸಮಿತಿಯನ್ನು ರಚಿಸಲಾಯಿತು. 1949 ಸೆಪ್ಟೆಂಬರ್ ತಿಂಗಳಿನಲ್ಲಿ ಈ ಸಮಿತಿಯನ್ನು ರಚಿಸಲಾಯಿತು 1950 ರ ತಿಂಗಳಿನಲ್ಲಿ ವರದಿಯನ್ನು ಒಪ್ಪಿಸಿತು ಗ್ರಾಮ ಗ್ರಾಮ ಗ್ರಾಮ ಪಂಚಾಯಿತಿ ಜಿಲ್ಲಾ ಮಂಡಳಿ ಇರುವ ಎರಡು ಹಂತಗಳ ಸ್ಥಳಾವಕಾಶದ ವ್ಯವಸ್ಥೆ ಜೊತೆಗೆ ತಾಲೂಕು ಮಟ್ಟದ ಎಲ್ಲಾ ಗ್ರೂಪ್ ಪಂಚಾಯಿತಿಗಳ ಅಧ್ಯಕ್ಷರನ್ನು ಒಳಗೊಂಡ ಸಮನ್ವಯ ವೆಂಕಟಪ್ಪ ಸಮಿತಿ ಶಿಫಾರಸ್ಸು ಮಾಡಿತು. ಆ ಸಂದರ್ಭದ ಅತ್ಯಂತ ಪ್ರಗತಿಪರ ವರದಿ ಎಂದು ಬಣ್ಣಿಸಲಾಯಿತು

 ನಂತರ ಆನಂತರ ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸರ್ಕಾರವು ಬಲವಂತರಾಯ ಮೆಹತ ನೇತೃತ್ವದಲ್ಲಿ ರಚಿಸಿದ ಸಮಿತಿಯು ನೀಡಿದ ಶಿಫಾರಸುಗಳು ದೇಶದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗೆ ಕಾರಣವಾಯಿತು. 1959 ರಿಂದ ಎಲ್ಲಾ ರಾಜ್ಯಗಳ ಪಂಚಾಯತ್ ರಾಜ್ ಅಧಿನಿಯಮವನ್ನು ಜಾರಿಗೆ ತರಲಾಯಿತು ಮೂರು ಹಂತಗಳ ಪಂಚಾಯತ್ ರಾಜ್ ಸಂಸ್ಥೆ ಹುಟ್ಟು ಹಾಕಲಾಯಿತು.

 ಗ್ರಾಮ ಗ್ರಾಮ ಪಂಚಾಯಿತಿ

 ಬ್ಲಾಕ್ ಪಂಚಾಯಿತಿ ಬ್ಲಾಕ್ (ತಾಲೂಕು ಬೋರ್ಡ್)

 ಜಿಲ್ಲಾ ಪರಿಷತ್ ಜಿಲ್ಲಾ ಪರಿಷತ್

 ಈ ವ್ಯವಸ್ಥೆಯಲ್ಲಿ ತಾಲೂಕು ಅಭಿವೃದ್ಧಿ ಮಂಡಳಿ(ತಾಲೂಕು ಮಂಡಳಿ)ಗೆ ಹೆಚ್ಚಿನ ಅಧಿಕಾರ ನೀಡಲಾಯಿತು

 ಬದಲಾವಣೆಯ ಯುಗ

 ನಂತರ 1977ರಲ್ಲಿ ಮೊರಾರ್ಜಿ ದೇಸಾಯಿ ಅವರ ನೇತೃತ್ವದ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಈ ಪಂಚಾಯತ್ ರಾಜ್ಯಕಲ್ಪಕ್ಕೆ ಪ್ರಯತ್ನ ಮಾಡಿತು ಇದರ ಪರಿಣಾಮವೇ ಅಶೋಕ್ ಮೆಹ್ತಾ ಸಮಿತಿಯ ರಚನೆ ದೇಶಾದ್ಯಂತ ಎರಡು ಹಂತಗಳ ಪಂಚಾಯತ್ ರಾಜ್ಯ ಸ್ಥಾಪನೆಗೆ ತರಲು ಶಿಫಾರಸ್ಸು ಮಾಡಿತು.
 ಮಂಡಲ ಪಂಚಾಯಿತಿ
 ಜಿಲ್ಲಾ ಜಿಲ್ಲಾ ಪರಿಷತ್
 ಪಂಚಾಯತ್ ರಾಜ್ ಸಂಸ್ಥೆಗಳು ಸರಕಾರದ ರೀತಿಯಲ್ಲಿ ಕೆಲಸ ಮಾಡಬೇಕು ಆದ್ದರಿಂದ ಅವುಗಳಿಗೆ ಹೆಚ್ಚಿನ ಸಂಪನ್ಮೂಲ ಮತ್ತು ಅಧಿಕಾರವನ್ನು ಒದಗಿಸುವ ಅಗತ್ಯವಿದೆ ಎಂದು ಅಶೋಕ್ ಮಹತ್ ಸಮಿತಿ ಅಭಿಪ್ರಾಯ ಪಟ್ಟಿತು. ಈ ಸಮಿತಿಯ ವರದಿ ಅನುಷ್ಠಾನಕ್ಕೆ ಬರುವ ಮೊದಲೇ ಮುರಾರ್ಜಿ ಸರ್ಕಾರ ಪತನವಾದ ಕಾರಣ ಸಮಿತಿಯ ಶಿಫಾರಸುಗಳು ಕಾಯ್ದೆಯ ರೂಪಕ್ಕೆ ಬರಲು ಸಾಧ್ಯವಾಗಲಿಲ್ಲ ಆದರೆ ಆಗ ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಪಕ್ಷಗಳು ಅಶೋಕ್ ಮಹೇತ ಸಮಿತಿಯ ಶಿಫಾರಸಿನ ಆಧಾರದಲ್ಲಿ ಪಂಚಾಯತ್ ರಾಜ್ ಸಂಸ್ಥೆ ಹುಟ್ಟಿ ಹಾಕಿದವು. ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಹಾಗೂ ಅಂದಿನ ಪಂಚಾಯತ್ ರಾಜ್ ಸಚಿವ ಅಬ್ದುಲ್ ನಜೀರ್ ಸಾಬ್ ರವರ ಪ್ರಯತ್ನದಿಂದ 1987 1992 ರ ಅವಧಿಯಲ್ಲಿ ನಡೆದ ಮಂಡಲ ಪಂಚಾಯಿತಿ ಹಾಗೂ ಜಿಲ್ಲಾ ಪರಿಷತ್ ವ್ಯವಸ್ಥೆ ಅಧಿಕಾರ ವಿಕೇಂದ್ರಿಯ ಶಕ್ತಿಯನ್ನು ತೋರಿಸಿತು. ಆಡಳಿತದಲ್ಲಿ ಜನಸಾಮರ್ಥ್ಯಕ್ಕೆ ಅವಕಾಶ ಕಲ್ಪಿಸುವ ಗ್ರಾಮ ಸಭೆಗಳ ರಚನೆ ಮತ್ತು ಆಡಳಿತದಲ್ಲಿ ಮಹಿಳೆಯರಿಗೆ ಮತ್ತು ಪರಿಶಿಷ್ಟರಿಗೆ ಅವಕಾಶ ಕಲ್ಪಿಸುವ ರಾಜಕೀಯ ಮೀಸಲಾತಿಯನ್ನು ಒದಗಿಸಿದ ಹೆಗ್ಗಳಿಕೆ ನಜೀರ್ ಸಾಬ್ ಅವರಿಗೆ ಸಲ್ಲಬೇಕು ಈ ವ್ಯವಸ್ಥೆಯ ಸಾಧನೆಯ ಪರಿಣಾಮವಾಗಿ ಇಂದು ನಾವು ಕಾಣುತ್ತಿರುವ ಮೂರು ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ.
 ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ರಚನೆಯನ್ನು ಕಂಡು ಪ್ರೇರಿತರಾದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಡಾ. ಎಲ್ ಎಂ ಸಿಂಗ್ವಿ ನೇತೃತ್ವದ ಸಮಿತಿಯನ್ನು ರಚಿಸಿದರು. ಇಡೀ ದೇಶಕ್ಕೆ ಏಕರೂಪದ ಸಮರ್ಥ ಪಂಚಾಯತ್ ರಾಜ್ ವ್ಯವಸ್ಥೆಯ ಮಾದರಿಯನ್ನು ಈ ಸಮಿತಿ ಶಿಫಾರಸು ಮಾಡಿದೆ. ಈ ಶಿಫಾರಸ್ಸುಗಳ ಆಧಾರದಲ್ಲಿ ಸಂವಿಧಾನದ 73ನೇ ತಿದ್ದುಪಡಿಯನ್ನು ತರಲಾಗಿದೆ 1993 ಏಪ್ರಿಲ್ 24 ರಿಂದ ಸಂವಿಧಾನದ 73 ನೇ ತಿದ್ದುಪಡಿಯ ಆಧಾರದಲ್ಲಿ ಮೂರು ಹಂತಗಳ ಪಂಚಾಯತ್ ರಾಜ್ ಸ್ಥಾಪನೆಯನ್ನು ಜಾರಿಗೆ ತರಲಾಗಿದೆ.
  1.  ಗ್ರಾಮ ಪಂಚಾಯಿತಿ
  2.  ಮಧ್ಯಂತರ ಪಂಚಾಯಿತಿ ಮಧ್ಯಂತರ ಪಂಚಾಯಿತಿ
  3.  ಜಿಲ್ಲಾ ಪಂಚಾಯಿತಿ ಜಿಲ್ಲಾ ಪಂಚಾಯಿತಿ
 ಸಂವಿಧಾನದ 73ನೇ ತಿದ್ದುಪಡಿಯ ಉದ್ದೇಶಗಳು
 ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ತತ್ವಗಳನ್ನು ಸ್ಥಳೀಯ ಸರ್ಕಾರಕ್ಕೆ ಅಳವಡಿಸಿಕೊಳ್ಳುವುದು
  1.  ಪಂಚಾಯತ್ ರಾಜ್ ವ್ಯವಸ್ಥೆಗೆ ಸಂವಿಧಾನದಲ್ಲಿ ಅಸ್ತಿತ್ವ ಕಲ್ಪಿಸುವುದು
  2.  ಆಡಳಿತದಲ್ಲಿ ಜನರ ಸಹಭಾಗಿತ್ವಕ್ಕೆ ಅವಕಾಶ
  3.  ಯೋಜನೆ ತಯಾರಿ ಮತ್ತು ಪರಿಣಾಮಕಾರಿ ಅನುಷ್ಠಾನದ ಜವಾಬ್ದಾರಿ
  4.  ಆಡಳಿತಾತ್ಮಕ ಆರ್ಥಿಕ ಮತ್ತು ರಾಜಕೀಯ ವಿಕೇಂದ್ರೀಕರಣ 
 73 ನೇ ತಿದ್ದುಪಡಿಯ ಮುಖ್ಯಾಂಶಗಳು
  •  ಗ್ರಾಮ ಸಭೆಗೆ ಸಂವಿಧಾನಿಕ ಅಸ್ತಿತ್ವ
  •  ಮೂರು ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ
  •  ಎಲ್ಲಾ ನೇರ ಚುನಾವಣೆಯ ಮೂಲಕ ಪ್ರತಿನಿಧಿಗಳ ಆಯ್ಕೆ
  •  ಸದಸ್ಯರು ಹಾಗೂ ಅಧ್ಯಕ್ಷರು ಅಥವಾ ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ
  •  ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ಅವರ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ
  •  ಮಹಿಳೆಯರಿಗೆ ಮೂರನೇ ಒಂದು ಭಾಗ ಮೀಸಲಾತಿ ಪ್ರಸ್ತುತ ಕರ್ನಾಟಕದಲ್ಲಿ ಮಹಿಳೆಯರಿಗೆ ಶೇಕಡ 50ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ
  •  ಹಿಂದುಳಿದ ವರ್ಗಗಳಿಗೆ ಪ್ರತಿ ಮೀಸಲಾತಿ ಕಲ್ಪಿಸುವುದು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟ ವಿಚಾರ ಐದು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಚುನಾವಣೆ ನಡೆಸಬೇಕು
  •  ಪಂಚಾಯತ್ ರಾಜ್ ಸಂಸ್ಥೆಗಳ ಚುನಾವಣೆ ನಡೆಸಲು ಪ್ರತ್ಯೇಕ ಚುನಾವಣಾ ಆಯೋಗದ ರಚನೆ
  •  ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಒದಗಿಸಬೇಕಾದ ಅನುದಾನದ ಕುರಿತು ತೀರ್ಮಾನಿಸಲು ರಾಜ್ಯ ಹಣಕಾಸು ಆಯೋಗ ರಚನೆ
  •  ಸ್ಥಳೀಯ ಸರ್ಕಾರಗಳ ಕಾರ್ಯನಿರ್ವಹಣೆಗೆ ಪೂರಕವಾಗಿ ಅಧಿಕಾರ ಮತ್ತು ಜವಾಬ್ದಾರಿ ಹಂಚಿಕೆ
 ಮುಂಚೂಣಿಯಲ್ಲಿ ಕರ್ನಾಟಕ
 ಸಂವಿಧಾನದ 73 ನೇ ತಿದ್ದುಪಡಿಯ ಆಶಯಗಳನ್ನು ಜಾರಿಗೆ ತರಲು ಎಲ್ಲಾ ರಾಜ್ಯಗಳು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ಪ್ರಯತ್ನ. ಈ ಆಧುನಿಕ ಕರ್ನಾಟಕ ರಾಜ್ಯ ಮಂಚೂಣಿಯಲ್ಲಿದೆ.
  • ಸಂವಿಧಾನದ 73 ನೇ ತಿದ್ದುಪಡಿಯ ಎಲ್ಲಾ ಪ್ರಮುಖ ಅಂಶಗಳು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯಲ್ಲಿ ಯಥಾವತ್ತಾಗಿ ಅಳವಡಿಸಿಕೊಳ್ಳಲಾಗಿದೆ.
  •  ವಿಶೇಷವಾಗಿ ಹಿಂದುಳಿದ ವರ್ಗಗಳಿಗೆ ನಮ್ಮ ರಾಜ್ಯದಲ್ಲಿ ಶೇಕಡ 33ರಷ್ಟು ರಾಜಕೀಯ ಮೀಸಲಾತಿಯನ್ನು ಒದಗಿಸಲಾಗಿದೆ. ಇದರಲ್ಲಿ ಅತ್ಯಂತ ಹಿಂದುಳಿದ ವರ್ಗ ಶೇಕಡ 80 ಮತ್ತು ಹಿಂದುಳಿದ ವರ್ಗಕ್ಕೆ ಶೇಕಡ 20ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
  •  ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಗೆ 2002 ರಲ್ಲಿ ತಿದ್ದುಪಡಿ ತರುವ ಮೂಲಕ ವಾರ್ಡ್ ಸಭೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ 


Comments

Popular posts from this blog

ಬದುಕಿದಾಗ ಒಂದು ಗುಲಾಬಿ ಕೊಡಬಾರದೆ?

ಚೌಧರಿ ಚರಣ ಸಿಂಗ್" ಬಗ್ಗೆ ಬಲ್ಲಿರಾ ?

ಯುವ ನಿಧಿಗೆ ಅರ್ಜಿ ಹಾಕಲು ಕಡ್ಡಾಯವಾಗಿ ಇರಬೇಕಾದ ದಾಖಲೆಗಳು