ಚೌಧರಿ ಚರಣ ಸಿಂಗ್" ಬಗ್ಗೆ ಬಲ್ಲಿರಾ ?

     


ಉರಿ ಬಿಸಿಲನ್ನು ಲೆಕ್ಕಿಸದೆ ಉಳುಮೆ ಮಾಡಿ ನಮ್ಮೆಲ್ಲರ ಉಳುವಿಗಾಗಿ ಶ್ರಮಿಸುತ್ತಿರುವ ಅನ್ನದಾತರಿಗೆಲ್ಲ ಕೃತಜ್ಞತೆ ಸಲ್ಲಿಸುವ ದಿನವೇ *"ರಾಷ್ಟ್ರೀಯ ರೈತರ ದಿನಾಚರಣೆ."* ಈ ದಿನವನ್ನು *ಭಾರತದ ಐದನೇ ಪ್ರಧಾನಿ ಚೌಧರಿ ಚರಣ ಸಿಂಗ್* ಸ್ಮರಣಾರ್ಥ ವರ್ಷಂಪ್ರತಿ ಡಿಸೆಂಬರ್ 23 ರಂದು ಆಚರಿಸಲಾಗುತ್ತದೆ. ರೈತ ಕುಟುಂಬದ ಚರಣ ಸಿಂಗ್ ರವರು ಉತ್ತರ ಪ್ರದೇಶದ ಘಾಜಿಯಾಬಾದ ಜಿಲ್ಲೆಯ ನೂರ್ ಪುರ್ ಎಂಬ ಕುಗ್ರಾಮದಲ್ಲಿ ಡಿಸೆಂಬರ್ 23, 1902 ರಂದು ಜನಿಸಿದರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕಾನೂನು ಪದವಿಯನ್ನು ಪಡೆದಿರುವ ಇವರು ತಮ್ಮ ಮೂಲ ಕಾಯಕ ಕೃಷಿಯಲ್ಲಿ ತಲ್ಲೀನರಾಗಿದ್ದಾರೆ. ಸ್ವಾತಂತ್ರ್ಯ ಪೂರ್ವ 1937 ರಲ್ಲಿ ಚಪ್ರೌಲಿ ಕ್ಷೇತ್ರದಿಂದ 34 ನೇ ವಯಸ್ಸಿನಲ್ಲಿ ರೈತರು ಕಷ್ಟಪಟ್ಟು ರಾಜಕೀಯ ಚರಣಸಿಂಗರು - ನಷ್ಟಗಳನ್ನು ಅನುಭವಿಸಿದ ಪರಿಣಾಮ ಅಧಿಕಾರದಲ್ಲಿ ರೈತರ ಕಲ್ಯಾಣಕ್ಕಾಗಿ ಸಾಕಷ್ಟು ರೈತಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಇವರು ಜುಲೈ 28, 1979 ರಿಂದ 14 ಜನವರಿ 1980 ರ ವರೆಗೆ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಸುಧಾರಣೆಗಳು ಮತ್ತು ನಿಯಮಾವಳಿಗಳನ್ನು ಜಾರಿಗೊಳಿಸಲಾಗಿದೆ. ಚೌಧರಿಯವರು ಜಾರಿಗೊಳಿಸಿದ *"ಜಮೀನ್ದಾರಿ ನಿರ್ಮೂಲನ ಕಾಯ್ದೆ"*ಯಿಂದ ರೈತರ ಬದುಕೇ ಹೊಸ ದಿಕ್ಕಿನತ್ತ ಸಾಗಿತು. ಇಂತಹ ಅದೆಷ್ಟೋ ಯೋಜನೆಗಳನ್ನು ಜಾರಿಗೊಳಿಸಿ ರೈತರ ನೆಚ್ಚಿನ ನಾಯಕ ಎನಿಸಿಕೊಂಡರು. ಇವರು ಉತ್ತಮ ಬರಹಗಾರರು ಆಗಿದ್ದರು. ದೇಶಾದ್ಯಂತ ಜಾರಿಯಲ್ಲಿರುವ *ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆ* ಜಾರಿಗೊಳಿಸಿದ ಕೀರ್ತಿ ಚೌಧರಿಯವರಿಗೆ ಸಲ್ಲುತ್ತದೆ. *ಜಮೀನ್ದಾರಿ ಪದ್ಧತಿ ನಿಷೇಧ, ಭೂ ಸುಧಾರಣೆ ಕಾಯ್ದೆ ಜಾರಿ, ಭಾರತೀಯ ಕಾರ್ಮಿಕ ಕಾಯ್ದೆ* ಗೆ ಹೊಸ ರೂಪರೇಷೆ ತಂದವರು ದೇಶದ 5 ನೇ ಪ್ರಧಾನಿ. ಉಪಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರಾಗಿ ಹಲವಾರು ಸುಧಾರಣೆಗಳನ್ನು ಜಾರಿಗೊಳಿಸಿದರು. 1979 ರ ಬಜೆಟ್ ಅನ್ನು ಸಂಪೂರ್ಣವಾಗಿ ರೈತರ ಬೇಡಿಕೆಗಳ ಬಂಡವಾಳಕ್ಕೆ ಮೀಸಲಿಟ್ಟರು. *ಜವಾಹರ್ ಲಾಲ್ ನೆಹರೂ ಅವರ ಸಾಮೂಹಿಕ ಭೂ - ಬಳಕೆಯ ನೀತಿಗಳ ವಿರುದ್ಧ ಧ್ವನಿ ಎತ್ತಿದವರು. ರೈತರು ಹೋರಾಡಿದ, ಬರವಣಿಗೆಯ ಮೂಲಕ ಅನ್ನದಾತರ ಸಮಸ್ಯೆಗಳ ಅನಾವರಣಗೊಳಿಸಿದ ಚರಣ್ ಸಿಂಗ್ ಚೌಧರಿ ಅವರು 29 ಮೇ 1987 ರಂದು ನಿಧನರಾದರು. ಈ ದಿನ ವಿಭಾಗೀಯ, ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ರೈತರಿಗಾಗಿ ವಿಚಾರ ಸಂಕಿರಣಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತವೆ. ಈ ದಿನದಂದು *ನವದೇಹಲಿಯ ಕಿಸಾನ್ ಘಾಟ್* ನಲ್ಲಿ ಚೌಧರಿ ಅವರ ಸಮಾಧಿಗೆ ನಾಯಕರು ಭೇಟಿ ನೀಡಿ ಗೌರವ ಸಮರ್ಪಿಸುತ್ತಾರೆ.


*✍🏼 ಲೇಖನ : ಡಾ. ಕೃಷ್ಣ ಕುಮಾರ್.ಬಿ.*

*ಚರ್ಮ ರೋಗ ಹಿರಿಯ ತಜ್ಞರು,*

*ಮೈಸೂರು - 14*

Comments

Popular posts from this blog

ಬದುಕಿದಾಗ ಒಂದು ಗುಲಾಬಿ ಕೊಡಬಾರದೆ?

ಯುವ ನಿಧಿಗೆ ಅರ್ಜಿ ಹಾಕಲು ಕಡ್ಡಾಯವಾಗಿ ಇರಬೇಕಾದ ದಾಖಲೆಗಳು